ವಸುಮತಿ ಉಡುಪ (ಏಪ್ರಿಲ್ ೧೮, ೧೯೪೮) ಕನ್ನಡದ ಪ್ರಸಿದ್ಧ ಕಥೆಗಾರ್ತಿಯರಲ್ಲಿ ಒಬ್ಬರು. == ವೈಯಕ್ತಿಕ ಜೀವನ == ವಸುಮತಿ ಉಡುಪ ಅವರು ಏಪ್ರಿಲ್ 18, 1948ರಂದು ಹೊಸನಗರ ತಾಲ್ಲೂಕಿನ ‘ನಗರ’ ಎಂಬ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಕಿರಣಗೆರೆ ರಂಗಾಭಟ್ಟ ಮತ್ತು ತಾಯಿ ತ್ರಿಪುರಾಂಬ. ತೀರ್ಥಹಳ್ಳಿಯಲ್ಲಿ ಪಿಯುಸಿವರೆಗೆ ಓದಿದ ವಸುಮತಿ ಮದುವೆಯಿಂದಾಗಿ ಮುಂದೆ ಓದಲಿಲ್ಲ. == ಕೃತಿಗಳು == ಉಡುಪ ಬರೆದ ಕಥೆಗಳ ಸಂಖ್ಯೆ ಇನ್ನೂರಕ್ಕೂ ಹೆಚ್ಚು. ಇವರ ಅನೇಕ ಕಥೆಗಳು ಹಿಂದಿ, ತೆಲುಗು ಮುಂತಾದ ಹಲವಾರು ಭಾಷೆಗಳಿಗೆ ತರ್ಜುಮೆಗೊಂಡು ಜನಪ್ರಿಯವಾಗಿವೆ. ಇವರ ಬರಹಗಳು ದೂರದರ್ಶನದಲ್ಲಿ ಮೂಡಿಬಂದಿವೆಯಲ್ಲದೆ, 'ಮೃಗತೃಷ್ಣ' ಮತ್ತು ಇನ್ನಿತರ ಕೃತಿಗಳು ನಾಟಕಗಳಾಗಿ ಸಹ ಪರಿವರ್ತನೆಗೊಂಡಿವೆ. === ಕಥಾವಸ್ತು-ಶೈಲಿ === ಸರಳ ಭಾಷೆ, ನೇರ ನಿರೂಪಣೆ ವಸುಮತಿಯವರ ಶೈಲಿ. ಕಾದಂಬರಿ, ಕಥೆ, ಪ್ರಬಂಧ ಅವರ ನೆಚ್ಚಿನ ಪ್ರಕಾರಗಳು. ಉಡುಪ ಅವರು ಕತೆ ಹೇಳುವ ರೀತಿಯಲ್ಲಿ ಕ್ಲಿಷ್ಟತೆಯಿಲ್ಲ. ಮಹಿಳಾ ಓದುಗರಿಗಂತೂ ಅವರ ಕಥೆಗಳು ಅಚ್ಚುಮೆಚ್ಚು. ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕಥೆಗಳ ವಸ್ತು. ಸುತ್ತಮುತ್ತಲಿನ ಪ್ರಪಂಚದಲ್ಲಿ ಕಾಣಸಿಗುವ ಮಧ್ಯಮ, ಕೆಳಮಧ್ಯಮ ವರ್ಗದ ನೋವು ನಲಿವುಗಳೇ ಇವರ ಕಥೆಯ ಜೀವಾಳ. ಕಾದಂಬರಿಗಳು ಪರಿವರ್ತನೆ ಸಂಬಂಧಗಳು ಅನವರತ ಅವ್ಯಕ್ತ ಮುಂತಾದುವು ಕಥಾಸಂಕಲನಗಳು ಬಂದನಾ ಹುಲಿರಾಯನು ವಿಕಲ್ಪ ಶೇಷ ಪ್ರಶ್ನೆ ಸಂಕ್ರಮಣ ಅಂತರಂಗದ ಪಿಸುನುಡಿ ಬದುಕು ಮಾಯೆಯ ಮಾಟ ಮುಂತಾದವು ಪ್ರಬಂಧ ಸಂಕಲನ ಸೀತಾಳದಂಡೆ == ಪ್ರಶಸ್ತಿ-ಗೌರವಗಳು == ಅಳಸಿಂಗ ಪ್ರಶಸ್ತಿ ರಾಮಕ್ಕ ಪದ್ಮಕ್ಕ ಗ್ರಂಥಾಲಯ ಕಾದಂಬರಿ ಬಹುಮಾನ ಮುಂಬಯಿ ಕನ್ನಡಿಗರ ಕೂಟದ ಮಕ್ಕಳ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ ಕಥಾರಂಗ ಸಂಸ್ಥೆಯಿಂದ ಕನ್ನಡ ಕವಿತಾ ಪ್ರಶಸ್ತಿ ದು.ನಿಂ. ಬೆಳಗಲಿ ಸಾಹಿತ್ಯ ಪ್ರಶಸ್ತಿ 2019 - ಅಂಕಿತ ಪುಸ್ತಕ ಪುರಸ್ಕಾರ-ವರ್ಷದ ಲೇಖಕಿ == ಉಲ್ಲೇಖ ==